ಎಷ್ಟೋ ವರುಷಗಳ ಹಿಂದೆ ಕೊಂಡ ಪುಸ್ತಕಗಳನ್ನು ಈ ಲಾಕ್ ಡೌನ್ ಸಮಯದಲ್ಲಿ ಓದಲು ಸಾಧ್ಯವಾಗುತ್ತಿದೆ. ಅಂತಹುದೇ ಒಂದು ಪುಸ್ತಕ "ತಬ್ಬಲಿಯು ನೀನಾದೆ ಮಗನೆ". ಈ ಕಾದಂಬರಿಯ ಲೇಖಕರು ಡಾಕ್ಟರ್ ಎಸ್ ಎಲ್ ಭೈರಪ್ಪ ಅವರು .ಗೋಪಾಲನೆ,ಗೋ ಸಂರಕ್ಷಣೆ ಮತ್ತು ಗೋಪಾಲಕರ ಜೀವನಚರಿತ್ರೆ ಈ ಕಾದಂಬರಿಯ ಮೂಲವಸ್ತು. ತಬ್ಬಲಿಯು ನೀನಾದೆ ಮಗನೆ ಕಾದಂಬರಿಯು ಬಿ ವಿ ಕಾರಂತರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿ ಬಂದಿದೆ. ಕಾದಂಬರಿ ಓದದೇ ಚಲನಚಿತ್ರವನ್ನು ನೋಡಬಾರದು ಎಂಬ ಉದ್ದೇಶದಿಂದ ಮೊದಲು ಕಾದಂಬರಿಯನ್ನು ಓದಿ ಆನಂತರ ಚಲನಚಿತ್ರವನ್ನ ನೋಡಿದೆ .ಕಾದಂಬರಿಗೂ ಮತ್ತು ಚಲನಚಿತ್ರಕ್ಕೂ ಬಹಳ ವ್ಯತ್ಯಾಸಗಳು ಕಂಡುಬಂದಿದ್ದು ಕಾದಂಬರಿಯೇ ಚಲನಚಿತ್ರಕ್ಕಿಂತ ಬಹಳ ಉತ್ತಮವಾಗಿದೆ ಎಂಬುದು ನನ್ನ ಅನಿಸಿಕೆ.
ಭಾರತ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಗೋವಿನ ಬಗೆಗಿನ ನಂಬಿಕೆಗಳು ಬಹಳ ವಿಭಿನ್ನವಾಗಿದೆ. ಭಾರತದಲ್ಲಿ ಗೋವು ಮಾತೃಸ್ಥಾನದಲ್ಲಿದ್ದು ಪೂಜನೀಯವಾಗಿದ್ದರೆ, ಪಾಶ್ಚಾತ್ಯ ದೇಶಗಳಲ್ಲಿ ಅದು ಕೇವಲ ಒಂದು ಪ್ರಾಣಿಯಾಗಿಯೂ ಮತ್ತು ಮನುಷ್ಯನಿಗೆ ಆಹಾರವಾಗಿಯೂ ಪರಿಗಣಿಸಲ್ಪಡುತ್ತದೆ. "ಧರಣಿ ಮಂಡಲ ಮಧ್ಯದೊಳಗೆ " ಎಂಬ ಗೋವಿನ ಹಾಡಿನಲ್ಲಿ ಉಲ್ಲೇಖಿಸಲ್ಪಡುವ ಕಾಳಿಂಗ ಎಂಬ ಹೆಸರನ್ನೇ ಹಿಡಿದು ಭೈರಪ್ಪ ಅವರು ಕಥೆಯನ್ನು ಪ್ರಾರಂಭಿಸುತ್ತಾರೆ. ಕಾಳಿಂಗನ ವಂಶ ಗೋಪಾಲಕರ ವಂಶವಾಗಿದ್ದು , ಅವರ ದೊಡ್ಡಿಯಲ್ಲಿ ಪುಣ್ಯಕೋಟಿ ತಳಿಯ ಹಸುಗಳಿರುತ್ತವೆ. ತಾತ ಮೊಮ್ಮಕ್ಕಳು ಒಂದೇ ಹೆಸರಿನಿಂದ ಕರೆಯಲ್ಪಡುತ್ತಾರೆ . ದೊಡ್ಡ ಕಾಳಿಂಗನನ್ನು ಗೌಡಜ್ಜ ಎಂದು ಕರೆದು, ಮೊಮ್ಮಗ ಕಾಳಿಂಗನನ್ನು ಪುಟ್ಟ ಕಾಳಿಂಗ ಮತ್ತು ಆ ನಂತರ ಕಾಳಿಂಗ ಎಂದು ಕರೆಯಲ್ಪಡುತ್ತಾ , ತಲೆಮಾರಿನಲ್ಲಿ ಆಗುವ ಬದಲಾವಣೆಗಳನ್ನು ಬಹಳ ಸೂಚ್ಯವಾಗಿ ಭೈರಪ್ಪನವರು ತೋರಿಸುತ್ತಾ ಹೋಗುತ್ತಾರೆ. ಜೈಮಿನಿಯನ್ನು ಓದಬಲ್ಲ ಗೌಡಜ್ಜಊರಿಗೆ ಹಿರಿಯ ಮತ್ತು ಗೋಪಾಲಕರಲ್ಲಿ ಬಹಳ ಪ್ರಮುಖ. ಎಕರೆಗಟ್ಟಲೆ ಜಮೀನು ಮತ್ತು ಗೋಮಾಳ ವನ್ನು ಹೊಂದಿದ ಅವನು ಗೋವನ್ನು ತನ್ನ ತಾಯಿ ಅಕ್ಕ ತಂಗಿ ಬಂಧು ಬಾಂಧವರಂತೆ ಭಾವಿಸಿರುತ್ತಾನೆ. ಒಂದು ದುರದೃಷ್ಟಕರ ಘಟನೆಯಲ್ಲಿ ತನ್ನ ಮಗನನ್ನು ಕಳೆದುಕೊಳ್ಳುವ ಗೌಡ ತನ್ನ ಮೊಮ್ಮಗನನ್ನು ಬಹಳ ಪ್ರೀತಿಯಿಂದ ಬೆಳೆಸಿ ಅವನು ಇನ್ನೂ ಹೆಚ್ಚು ಓದಲಿ ಎಂಬ ಏಕೈಕ ಆಸೆಯಿಂದ ಮೊಮ್ಮಗನಿಗೆ ಶಾಲೆಯಲ್ಲಿ ಇಂಗ್ಲಿಷನ್ನು ಓದಿಸುತ್ತಾನೆ. ಊರ ಜೋಯಿಸರ ಮಗ ವೆಂಕಟರಮಣ ಕೂಡ ಸಂಸ್ಕೃತವನ್ನು ಓದಲು ಮೈಸೂರಿಗೆ ಹೋದ ನಂತರ ತನ್ನ ಮೊಮ್ಮಗನನ್ನು ಸ ಕಳಿಸಲು ಗೌಡ ಬಹಳ ಕಷ್ಟದಿಂದ ಒಪ್ಪಿಕೊಳ್ಳುತ್ತಾನೆ. ಆದರೆ ಅಲ್ಲಿ ಹೋದಮೇಲೆ ಮೊಮ್ಮಗ ಪುಟ್ಟ ಕಾಳಿಂಗನ ಯೋಚನೆ ಮತ್ತು ಬದುಕಿನ ಶೈಲಿ ಬದಲಾಗಿ ಅವನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕೆಗೆ ಹೋಗುತ್ತಾನೆ. ಇತ್ತ ಊರಿನಲ್ಲಿ ಹಲವಾರು ಬದಲಾವಣೆಗಳು ಆಗಿ ಗೌಡಜ್ಜ ತನ್ನ ಗೋಮಾಳವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಮಧ್ಯದ ದಾರಿಯನ್ನು ಹುಡುಕಿ ಗೋಮಾಳವನ್ನು ಸಂರಕ್ಷಿಸುವಲ್ಲಿ ಗೌಡ ತಕ್ಕಮಟ್ಟಿಗೆ ಯಶಸ್ವಿಯಾಗುತ್ತಾನೆ. ತನ್ನ ದೊಡ್ಡಿಯಲ್ಲಿ ಪುಣ್ಯಕೋಟಿ ತಳಿಯ ಹಸು ಇರುವುದರಿಂದ ಪುಣ್ಯಕೋಟಿಗೆ ಒಂದು ದೇವಸ್ಥಾನವನ್ನು ಕಟ್ಟಿಸಬೇಕು ಎಂಬ ಉದ್ದೇಶದಿಂದ ಬೆಟ್ಟದ ಮೇಲೆ ಪುಣ್ಯಕೋಟಿ ಮತ್ತು ಅರ್ಬುದ ಎಂಬ ವ್ಯಾಘ್ರ ಇತ್ತು ಎಂದು ನಂಬಲಾದ ಒಂದು ಗುಹೆಯ ಬಳಿ ಪುಣ್ಯಕೋಟಿ ದೇವಸ್ಥಾನವನ್ನು ಕಟ್ಟಿಸಬೇಕೆಂದು ಅವನು ಸಂಕಲ್ಪ ಮಾಡುತ್ತಾನೆ. ಊರವರೆಲ್ಲರ ಸಹಾಯದಿಂದ ಒಂದು ದೇವಸ್ಥಾನ ಮತ್ತು ಒಂದು ಕಲ್ಯಾಣಿ ಏರ್ಪಟ್ಟು ಪ್ರಾಣಪ್ರತಿಷ್ಠಾಪನೆ ಎಲ್ಲವೂ ಸಹ ಆಗುತ್ತದೆ.ಇದೆಲ್ಲಾ ಆದರೂ ಕಾಳಿಂಗ ಅಮೇರಿಕೆಯಿಂದ ಬಂದೇ ಇರುವುದಿಲ್ಲ .ತಾನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದ ಗೋಮಾಳವನ್ನು ಕಡೆಗೂ ಸರ್ಕಾರದವರು ಪಡೆದುಕೊಂಡು ಅದನ್ನು ಇಬ್ಭಾಗವಾಗಿಸಿ ತನ್ನ ಮಗ ಹಾಗೂ ಒಂದು ಪುಣ್ಯಕೋಟಿ ಹಸುವಿನ ಸಮಾಧಿಯನ್ನು ಸಹ ಕೆಡಿಸಿ ಬಿಟ್ಟು ಅಲ್ಲೆ ರಸ್ತೆಯನ್ನು ಹಾಕುವುದಾಗಿ ಆದೇಶ ಬಂದಾಗ ದುಃಖವನ್ನು ತಡೆಯಲಾರದೆ ಗೌಡಜ್ಜನ ಹೆಂಡತಿ ಸತ್ತು ಹೋಗುತ್ತಾಳೆ. ಗೋಮಾಳ ಇಬ್ಭಾಗವಾದ ನಂತರ ಆ ದುಃಖವನ್ನು ತಡೆಯಲಾರದೆ ಗೌಡಜ್ಜ ಸಹ ತೀರಿ ಹೋಗುತ್ತಾನೆ.
ಗೌಡ ತೀರಿಹೋದ ಎಂದು ಟೆಲಿಗ್ರಾಂ ಮೂಲಕ ವಿಷಯ ತಿಳಿದುಕೊಳ್ಳುವ ಪುಟ್ಟ ಕಾಳಿಂಗ ಅವನ ತಿಥಿಯ ಸಮಯಕ್ಕೆ ಊರು ತಲಪುತ್ತಾನೆ. ತಾನು ತಲೆಬೋಳಿಸಿಕೊಂಡು ತಿಥಿ ಮಾಡುವುದಿಲ್ಲವೆಂದು ಹಠ ಮಾಡುವ ಕಾಳಿಂಗ ತಾನು ಬದಲಾಗಿದ್ದಾನೆ ಎಂಬುದ ಬಂದ ತಕ್ಷಣವೇ ಊರಿಗೆ ತೋರಿಸಿಬಿಡುತ್ತಾನೆ. ಗೋಮಾಳದ ಜಾಗದ ಬದಲಾಗಿ ಬೆಟ್ಟದ ತಪ್ಪಲಿನ ಜಮೀನೆಲ್ಲವನ್ನು ಪಡೆದುಕೊಳ್ಳುವ ಪುಟ್ಟ ಕಾಳಿಂಗ ಒಂದು ಫಾರ್ಮ್ ಹೌಸ್ ಅನ್ನು ಕಟ್ಟಿಕೊಂಡು ಹಸುಗಳನ್ನೆಲ್ಲಾ ಒಂದು ಹೊಸದೊಡ್ಡಿಯಲ್ಲಿ ಸೇರಿಸುತ್ತ ತನ್ನ ಮೂಗಿ ತಾಯಿ ತಾಯವ್ವನ ಕೋಪಕ್ಕೆ ಗುರಿಯಾಗುತ್ತಾನೆ. ಯಾರಿಗೂ ತಿಳಿಸದೆ ಅಮೇರಿಕೆಯಲ್ಲಿ ಅಮೇರಿಕನ್ ಒಬ್ಬಳನ್ನು ಮದುವೆಯಾಗಿರುತ್ತಾನೆ. ಅವನಿಗೆ ಎಂಟು ತಿಂಗಳ ಒಂದು ಮಗುವು ಸಹ ಇರುತ್ತದೆ. ತನ್ನ ಗೆಳೆಯ ವೆಂಕಟರಮಣ ಈ ಊರಿನ ಅರ್ಚಕನಾಗಿರುತ್ತಾನೆ. ಅವನಿಗೆ ಈ ವಿಷಯವನ್ನು ತಿಳಿಸುವ ಪುಟ್ಟ ಕಾಳಿಂಗ ಹಲವಾರು ಘಟನೆಗಳ ಮೂಲಕ ವೆಂಕಟರಮಣನ ಕೋಪಕ್ಕೂ ಸಹ ಗುರಿಯಾಗುತ್ತಾನೆ . ಕಾಳಿಂಗನ ಹೆಂಡತಿ ಹಿಲ್ಡಾ ಳ ಆಗಮನವಾದ ನಂತರ ಪರಿಸ್ಥಿತಿ ಬಹಳ ಬದಲಾಗುತ್ತದೆ. ಅವರ ಹೊಸ ಫಾರ್ಮ್ಹೌಸ್ನಲ್ಲಿ ಜಮೀಲ ಎಂಬ ಮುಸ್ಲಿಮ್ ಕುಟುಂಬ ವಾಸವಾಗಿ ಕೋಳಿ ಸಾಕಾಣಿಕೆಯಲ್ಲಿ ನಿರತವಾಗಿರುತ್ತದೆ. ಇಲ್ಲಿ ಬಂದ ಮೇಲೆ ಹಿಲ್ಡಾ ವೆಂಕಟರಮಣನ ಸ್ನೇಹವನ್ನು ಬಯಸಲು ಹೋಗಿ ಅಪಾರ ಅವಮಾನಗಳಿಗೆ ತುತ್ತಾಗುತ್ತಾಳೆ .ಅಷ್ಟು ಹೊತ್ತಿಗೆ ಈಗ ಮತ್ತೆ ಗರ್ಭಿಣಿಯಾಗಿರುತ್ತಾಳೆ .ಐದು ತಿಂಗಳ ಬಸರಿ ಒಂದು ದಿನ ವೆಂಕಟರಮಣನಿಂದ ಅವಮಾನಕ್ಕೊಳಗಾಗಿ ಇವರು ಪೂಜಿಸುವ ಪುಣ್ಯಕೋಟಿ ಹಸುವಿನಲ್ಲಿ ನಿಜವಾಗಿಯೂ ಮೂವತ್ಮೂರು ಕೋಟಿ ದೇವತೆಗಳು ಇದ್ದಾರೆಯೇ ಎಂದು ಲೇವಡಿ ಮಾಡುತ್ತಾ ಪುಣ್ಯಕೋಟಿ ಹಸುವೊಂದನ್ನು ತಿನ್ನಬೇಕೆಂದು ಜಮೀಲನಿಗೆ ಹೇಳುತ್ತಾಳೆ. ಈ ಮಾತನ್ನು ಕೇಳಿ ಹೆದರುವ ಜಮೀಲ ಈ ಕೆಲಸವನ್ನು ತಾನು ಮಾಡಲಾರ ಎಂದು ತಿಳಿಸುತ್ತಾನೆ . ಹಿಲ್ಡಾ ಬಹಳ ಬಲವಂತಮಾಡಿ ಜಮೀಲನ ಕೈಲಿ ಗೋಹತ್ಯೆ ಮಾಡಿಸುತ್ತಾಳೆ. ಆದರೆ ಅವಳು ಪುಣ್ಯಕೋಟಿಯ ಮಾಂಸವನ್ನು ತಿನ್ನಲಾರಳಾಗುತ್ತಾಳೆ. ಅದೇ ರಾತ್ರಿ ಕಾಳಿಂಗನಿಗೆ ಗೋಮಾಂಸವನ್ನು ಬಡಿಸುತ್ತಾ ತಾನು ಪುಣ್ಯಕೋಟಿಯನ್ನು ಸಾಯಿಸಿದ್ದೇನೆ ಎಂಬ ವಿಷಯವನ್ನು ಮುಚ್ಚಿಟ್ಟು ಕಾಳಿಂಗನ ಮನಸ್ಸನ್ನು ಬೇರೆಡೆ ಹರಿಸುವಲ್ಲಿ ಅವಳು ಯಶಸ್ವಿಯಾಗುತ್ತಾಳೆ. ಆದರೆ ಊರಿನ ಜನರಿಗೆ ಈ ವಿಷಯ ಗೊತ್ತಾಗಿ ದೊಡ್ಡ ರಾದ್ಧಾಂತ ನಡೆಯುತ್ತದೆ ಪುಣ್ಯಕೋಟಿಯನ್ನು ಸಾಯಿಸಿದ್ದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡ ಕಾಳಿಂಗ ಹಿಲ್ಡಾ ದೃಷ್ಟಿಯಲ್ಲಿ ಬಹಳ ಕೇವಲವಾಗಿ ಬಿಡುತ್ತಾನೆ . ಗಂಡಹೆಂಡತಿಯರಿಗೆ ಘೋರವಾದ ಜಗಳವಾಗುತ್ತದೆ ಮುಂದೇನಾಯಿತೆಂದು ತಿಳಿಯಲೇ ಪುಸ್ತಕವನ್ನು ಓದಿ.
ಈ ಕಾದಂಬರಿಯಲ್ಲಿ ನಮ್ಮನ್ನು ಬಹಳವಾಗಿ ಕಾಡುವ ಪಾತ್ರ ತಾಯವ್ವ ನದು . ಅವಳು ಮೂಕಿ ಯಾಗಿದ್ದರೂ ಸಹ ಅವಳ ಪಾತ್ರ ಪೋಷಣೆಯನ್ನು ಭೈರಪ್ಪ ಬಹಳ ಮನೋಜ್ಞವಾಗಿ ಮಾಡಿದ್ದಾರೆ. ತಾಯವ್ವನ ಪಾತ್ರದ ನಂತರ ನಮ್ಮನ್ನು ಮತ್ತಷ್ಟು ಕಾಡುವ ಪಾತ್ರಗಳು ಗೌಡಜ್ಜ, ಹಿರಿಯ ಮತ್ತು ಕಿರಿಯ ಜೋಯಿಸರದ್ದು. ಇಂತಹ ಅದ್ಭುತ ಕಾದಂಬರಿಯನ್ನು ಬರೆದ ಭೈರಪ್ಪನವರಿಗೆ ಎಷ್ಟು ಅಭಿನಂದನೆಗಳನ್ನು ಹೇಳಿದರೂ ಸಾಲದು. ಗೋಸಂರಕ್ಷಣೆಯ ಹೆಸರಿನಲ್ಲಿ ಕರುವಿಗೆ ಹಾಲನ್ನು ಬಿಡದೆ ಎಲ್ಲ ಹಾಲನ್ನು ಹೀರುವ ಪ್ರಯತ್ನ ಮಾಡುವ ಹಿಲ್ಡಾ ಮತ್ತು ಕಾಳಿಂಗ ಕಡೆಗೆ ತನ್ನ ಮಗುವಿಗೆ ಹಾಲನ್ನು ಕುಡಿಸಲು ಆಗದೇ ಒದ್ದಾಡುವ ರೀತಿ ಎಂತಹವರ ಕಣ್ಣಲ್ಲೂ ನೀರು ತರಿಸುತ್ತದೆ. ಕಾಳಿಂಗ ಕಡೆಗೆ ಹೇಗೆ ತಬ್ಬಲಿಯಾಗುತ್ತಾನೆ ಎಂಬುದನ್ನು ಓದಿಯೇ ತಿಳಿಯಬೇಕು.