Wednesday, July 4, 2018

ಬೆಸ್ಟ್ ಆಫ್ ಬಿ.ಜಿ.ಎಲ್.ಸ್ವಾಮಿ

ಪುಸ್ತಕದ ಹೆಸರು: ಬೆಸ್ಟ್ ಆಫ್ ಬಿ.ಜಿ.ಎಲ್.ಸ್ವಾಮಿ
ಲೇಖಕರು: ಬೇಲೂರು ರಾಮಮೂರ್ತಿ (ಸಂಪಾದಕರು)
ಪ್ರಕಾಶನ:ಅಂಕಿತ ಪುಸ್ತಕ

ನಾನು ಬಿ.ಜಿ.ಎಲ್. ಸ್ವಾಮಿಯವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ, "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ" ಪುಸ್ತಕ ಒಂದನ್ನು ಬಿಟ್ಟು. ಹಾಗಾಗಿ, ಈ ಪುಸ್ತಕದಲ್ಲಿ ನಾನು ಆ ಪುಸ್ತಕದಿಂದ ಕೆಲವಾದರೂ ಕತೆಗಳು ಸಿಗಬಹುದೆಂಬ ಆಸೆಯಲ್ಲಿದ್ದೆ. ಆದರೆ ನನಗೆ ನಾನು ಓದಿದ್ದ ಪುಸ್ತಕದ ಕತೆಗಳೇ ಓದಿ ಸ್ವಲ್ಪ ಬೇಜಾರಾಯಿತು.

ಇನ್ನೊಂದು ಬೇಜಾರಿನ ವಿಷಯ ಎಂದರೆ, ಇಲ್ಲಿ, ಸ್ವಾಮಿಯವರ ಮಾತೆಲ್ಲಾ passive voice ನಲ್ಲಿರುವುದು. ಅಂದರೆ, ಸಂಪಾದಕರ  "ಸ್ವಾಮಿ ಹೀಗೆ ಹೇಳುತ್ತಾರೆ/ಹೇಳಿದರು" ಎಂಬ ರೀತಿಯ ಬರಹಗಳು ನನ್ನನ್ನು ಮತ್ತಷ್ಟು ನಿರಾಸೆಗೊಳಿಸಿದವು. ಕಾಲೇಜು ರಂಗ, ತರಂಗ, ಹಸಿರು ಹೊನ್ನು, ತಮಿಳು ತಲೆಗಳ ನಡುವೆ, ಇದರಲ್ಲೆಲ್ಲಾ ಸ್ವಾಮಿಯವರೇ ನಿರೂಪಕರು. ಹಾಗಾಗಿ ಹಾಸ್ಯ ನೇರ ನಮಗೆ ಮುಟ್ಟುತ್ತಿತ್ತು. ಬಿದ್ದೂ ಬಿದ್ದೂ ನಕ್ಕಿದ್ದೆ. ಇದರಲ್ಲಿ, ಹಾಸ್ಯ ಮರೆಯಾಗಿ ಬರಿ ವಿಡಂಬನೆಯೇ ಎದ್ದುಕಾಣುತ್ತಿದ್ದು, ಇಲ್ಲಿ ಸ್ವಾಮಿಯವರ ಪರಿಸ್ಥಿತಿ ಬಗ್ಗೆ ಅನುಕಂಪ ಮೂಡಿಬಿಡುತ್ತದೆ !

ನಾನು ಸ್ವಾಮಿಯವರ ಕಟ್ಟಾ ಅಭಿಮಾನಿಯಾಗಿರುವುದರಿಂದ, ಈ ಪುಸ್ತಕ ನನಗಂತೂ ಬೆಸ್ಟ್ ಅನಿಸಲಿಲ್ಲ. ಲೇಖನಗಳು ಬೆಸ್ಟ್. ಅನುಮಾನ ಇಲ್ಲ. ಆದರೇ, ಸ್ವಾಮಿಯವರೇ ನಿರೂಪಕರಾಗಿದ್ದಿದ್ದರೆ ಅದರ ಮಜವೇ ಬೇರೆ ಇರುತ್ತಿತ್ತು ಅನ್ನುವುದು ನನ್ನ ಅಭಿಪ್ರಾಯ.

ಒಮ್ಮೆ ಓದಿ ಪಕ್ಕಕ್ಕಿಡಬಹುದು. 

2 comments:

  1. ಸ್ವಾಮಿಯವರ ಎಲ್ಲ ಲೇಖನಗಳು-ಕೃತಿಗಳೂ ಬೆಸ್ಟೇ.ಆರಿಸುವ ಅವಶ್ಯಕತೆಯೇ ಇಲ್ಲ

    ReplyDelete
    Replies
    1. ನಿಜ ಸರ್. ಆರಿಸಲು ಹೋಗಿಯೇ ತಪ್ಪಾಯಿತೇನೋ ಅನಿಸಿತು, ಈ ಪುಸ್ತಕವನ್ನು ಓದಿದ ಮೇಲೆ.

      Delete